Dwarakish Comedy Films : ಹಾಸ್ಯಮಯ ಪಾತ್ರಗಳಲ್ಲಿ ಸಿನಿರಸಿಕರ ಮನಸ್ಸು ಗೆದ್ದಿದ್ದ ಪ್ರಪಂಡ ಕುಳ್ಳನ ಸಿನಿಮಾಗಳಿವು!

[ad_1]

1964ರಲ್ಲಿ ವೀರ ಸಂಕಲ್ಪ ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ದ್ವಾರಕೀಶ್, ನಟರಾಗಿ, ಹಾಸ್ಯ ಕಲಾವಿದರಾಗಿ, ಪೋಷಕ ನಟನಾಗಿ ಕಾಣಿಸಿಕೊಂಡು ಸಿನಿ ರಸಿಕರ ಮನಸ್ಸನ್ನು ಗೆದ್ದುಕೊಂಡಿದ್ದರು. 1996ರ ‘ಮಮತೆಯ ಬಂಧನ’ ಚಿತ್ರದ ಮೂಲಕ ದ್ವಾರಕೀಶ್ ಅವರು ನಿರ್ಮಾಪಕರಾದರು. ‘ನೀ ಬರೆದ ಕಾದಂಬರಿ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿ ನಿರ್ದೇಶಕನ ಪಟ್ಟವನ್ನು ಅಲಂಕರಿಸಿದ್ದರು. ಅದಲ್ಲದೇ ದ್ವಾರಕೀಶ್ ಚಿತ್ರ’ ನಿರ್ಮಾಣ ಸಂಸ್ಥೆ ಮೂಲಕ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು.

 

ಕಿಟ್ಟು ಪುಟ್ಟು : ಕನ್ನಡ ಚಿತ್ರರಂಗದಲ್ಲಿ 70ರ ದಶಕದಲ್ಲಿ ಸದ್ದು ಮಾಡಿದ ಸಿನಿಮಾ ಈ ಸಿನಿಮಾದಲ್ಲಿ ವಿಷ್ಣುವರ್ಧನ್ ಮತ್ತು ದ್ವಾರಕೀಶ್ ಜೋಡಿಯು ಮೋಡಿ ಮಾಡಿತ್ತು. 1977ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ವಿಷ್ಣುವರ್ಧನ್ ಕಿಟ್ಟು ಪಾತ್ರದಲ್ಲಿ, ದ್ವಾರಕೀಶ್ ಪುಟ್ಟು ಮತ್ತು ಕುಟ್ಟಿ ಎಂಬ ದ್ವಿಪಾತ್ರದಲ್ಲಿ ನಟಿಸಿದ್ದರು. ತಮ್ಮ ಹಾಸ್ಯದ ಮೂಲಕ ದ್ವಾರಕೀಶ್ ಅವರು ಸಿನಿ ರಸಿಕರ ಮನಸ್ಸು ಗೆದ್ದಿದ್ದರು.

 

ಗುರು ಶಿಷ್ಯರು : 1981ರಲ್ಲಿ ಬಿಡುಗಡೆಯಾದ ಗುರು ಶಿಷ್ಯರು ಚಿತ್ರವನ್ನು ಭಾರ್ಗವ ನಿರ್ದೇಶನ ಮಾಡಿದ್ದರು. ವಿಷ್ಣುವರ್ಧನ್, ಮಂಜುಳಾ, ಜಯಮಾಲಿನಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ದ್ವಾರಕೀಶ್ ಈ ಚಿತ್ರವನ್ನು ನಿರ್ಮಿಸಿ ನಟಿಸಿದ್ದು, ಹಾಸ್ಯ ಭರಿತವಾದ ಶೈಲಿಯಿಂದ ಹಾಸ್ಯಪ್ರಿಯರ ಮನಸ್ಸು ಗೆದ್ದಿದ್ದರು.

ಆಪ್ತಮಿತ್ರ : ಆಪ್ತಮಿತ್ರ’ ಸಿನಿಮಾದಲ್ಲಿ ದ್ವಾರಕೀಶ್ ಅವರು ಕಾಮಿಡಿ ಪಾತ್ರದಲ್ಲಿ ಮಿಂಚಿದ್ದರು. 2004ರಲ್ಲಿ ಬಿಡುಗಡೆಯಾಗಿದ್ದ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ ಇದಾಗಿದ್ದು, ಮಲಯಾಳಂನ ‘ಮಣಿಚಿತ್ರತ್ತಾಳ್’ ರಿಮೇಕ್ ಆಗಿತ್ತು. ಕನ್ನಡದಲ್ಲಿ ಪಿ.ವಾಸು ನಿರ್ದೇಶನ ಮಾಡಿದ್ದ ಈ ಸಿನಿಮಾದಲ್ಲಿ ದ್ವಾರಕೀಶ್ ಅವರ ಕಾಮಿಡಿ ಸಿನಿರಸಿಕರ ಮನಸ್ಸು ಗೆದ್ದುಕೊಂಡಿತ್ತು.

ಕಳ್ಳ ಕುಳ್ಳ : 1975ರಲ್ಲಿ ತೆರೆಕಂಡ ಕಳ್ಳ ಕುಳ್ಳ ಸಿನಿಮಾದಲ್ಲಿ ದ್ವಾರಕೀಶ್ ಮತ್ತು ವಿಷ್ಣುವರ್ಧನ್ ನಟಿಸಿದ್ದರು. ಈ ಸಿನಿಮಾದಲ್ಲಿ ವಿಷ್ಣು ಅವರು ಮಹೇಶ್ ಎಂಬ ಕಳ್ಳನ ಪಾತ್ರದಲ್ಲಿ ಹಾಗೂ ದ್ವಾರಕೀಶ್ ಅವರು ರಮೇಶ್ ಎಂಬ ಕುಳ್ಳನ ಪಾತ್ರದಲ್ಲಿ ನಟಿಸಿ ಹಾಸ್ಯವನ್ನು ಉಣಬಡಿಸಿದ್ದರು..

 

ಪೆದ್ದ ಗೆದ್ದ : 1982 ರಲ್ಲಿ ತೆರೆ ಕಂಡ ಈ ಸಿನಿಮಾದಲ್ಲಿ ದ್ವಾರಕೀಶ್ ಅವರು ಪೆದ್ದದ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆರತಿ ಅವರು ಪ್ರಚಂಡ ಕುಳ್ಳನಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಎಚ್‌ಆರ್ ಭಾರ್ಗವ ಅವರ ನಿರ್ದೇಶನದಲ್ಲಿ ‘ಪೆದ್ದ ಗೆದ್ದ’ ಚಿತ್ರದಲ್ಲಿ ಡಾ. ವಿಷ್ಣುವರ್ಧನ್ ಮತ್ತು ಭಾರತಿಯವರು ನಟಿಸಿದ್ದರು. ಪೆದ್ದನಾಗಿ ಕಾಣಿಸಿಕೊಂಡಿದ್ದ ದ್ವಾರಕೀಶ್ ಅವರು ಪಾತ್ರದ ಮೂಲಕವೇ ಸಿನಿರಸಿಕರ ನಗಿಸಿದ್ದರು.

[ad_2]

Comments

No comments yet. Why don’t you start the discussion?

Leave a Reply

Your email address will not be published. Required fields are marked *