Dwarakish Obituary: ಹಲವು ದಿಗ್ಗಜರ ಜೊತೆ ನಟನೆ, ಸೂಪರ್ ಹಿಟ್ ಸಿನಿಮಾ ನಿರ್ಮಾಣ; ದ್ವಾರಕೀಶ್ ನಡೆದುಬಂದ ಹಾದಿ

Dwarakish Obituary: ಹಲವು ದಿಗ್ಗಜರ ಜೊತೆ ನಟನೆ, ಸೂಪರ್ ಹಿಟ್ ಸಿನಿಮಾ ನಿರ್ಮಾಣ; ದ್ವಾರಕೀಶ್ ನಡೆದುಬಂದ ಹಾದಿ


ನಟ, ನಿರ್ಮಾಪಕ, ನಿರ್ದೇಶಕ, ಚಿತ್ರಕಥೆಗಾರ ದ್ವಾರಕೀಶ್ (Dwarakish) ಅವರು ಇಂದು (ಏಪ್ರಿಲ್ 16) ನಿಧನ ಹೊಂದಿದ್ದಾರೆ. ಇಂದು ಮುಂಜಾನೆ ಅವರಿಗೆ ಹೃದಯಾಘಾತ ಆಗಿದೆ. ಕಾಫಿ ಕುಡಿದು ಮಲಗಿದ ಅವರು ಮತ್ತೆ ಏಳಲೇ ಇಲ್ಲ. ಅವರ ಅಗಲಿಕೆ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಹಲವು ದಿಗ್ಗಜರ ಜೊತೆ ಅವರು ನಟಿಸಿದ್ದರು. ಹಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನಿರ್ಮಾಣ ಮಾಡಿದ್ದರು. ಅವರ ಸಿನಿ ಜರ್ನಿ ಬಗ್ಗೆ ಇಲ್ಲಿದೆ ಮಾಹಿತಿ.

1942ರಲ್ಲಿ ದ್ವಾರಕೀಶ್ ಅವರು ಜನಿಸಿದರು. ಅವರ ಮೂಲ ಹೆಸರು ಬಂಗ್ಲೆ ಶಾಮ ರಾವ್ ದ್ವಾರಕನಾಥ. ನಿರ್ದೇಶಕ ಸಿವಿ ಶಿವಶಂಕರ್ ಅವರು ದ್ವಾರಕೀಶ್ ಎನ್ನುವ ಹೆಸರನ್ನು ಅವರಿಗೆ ನೀಡಿದ್ದರು. 1964ರಲ್ಲಿ ಬಿಡುಗಡೆ ಆದ ‘ವೀರ ಸಂಕಲ್ಪ’ ದ್ವಾರಕೀಶ್ ನಟನೆಯ ಮೊದಲ ಸಿನಿಮಾ, ಹುಣಸೂರು ಕೃಷ್ಣಮೂರ್ತಿ ಈ ಸಿನಿಮಾದ ನಿರ್ದೇಶಕರು. ಮೊದಲ ಸಿನಿಮಾದಲ್ಲಿಯೇ ಮುಖ್ಯ ಭೂಮಿಕೆಯಲ್ಲಿ ದ್ವಾರಕೀಶ್ ನಟಿಸಿದ್ದರು. ನಂತರ 1966ರಲ್ಲಿ ರಿಲೀಸ್ ಆದ ‘ಮಮತೆಯ ಬಂಧನ’ ಸಿನಿಮಾ ಮೂಲಕ ಅವರು ನಿರ್ಮಾಪಕರಾಗಿ ಬಡ್ತಿ ಪಡೆದರು. ಇವರ ಜೊತೆ ಇನ್ನೂ ಕೆಲವರು ಸಹ ನಿರ್ಮಾಪಕರಾಗಿ ಇದ್ದರು.

ಇದನ್ನೂ ಓದಿ  ನೋವು ಮರೆತು ಪಕ್ಷದೊಂದಿಗೆ ಕೈಜೋಡಿಸಿ ಎಂದು ಕೆಎಸ್​ ಈಶ್ವರಪ್ಪಗೆ ಕೈ ಮುಗಿದು ಮನವಿ ಮಾಡಿದ ಬಿ.ವೈ ವಿಜಯೇಂದ್ರ

ದ್ವಾರಕೀಶ್ ಅವರು ಸ್ವತಂತ್ರ ನಿರ್ಮಾಪಕರು ಎನಿಸಿಕೊಂಡಿದ್ದು 1969ರಲ್ಲಿ ರಿಲೀಸ್ ಆದ ‘ಮೇಯರ್ ಮುತ್ತಣ್ಣ’ ಸಿನಿಮಾ ಮೂಲಕ. ಈ ಸಿನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿ ಡಾ ರಾಜ್​ಕುಮಾರ್ ನಟಿಸಿದ್ದರು. ಆ ಸಿನಿಮಾ ಕನ್ನಡ ಚಿತ್ರರಂಗದ ಕಲ್ಟ್ ಸಿನಿಮಾಗಳಲ್ಲಿ ಒಂದು. ಆ ನಂತರ ನೂರಾರು ಸಿನಿಮಾಗಳಿಗೆ ದ್ವಾರಕೀಶ್ ಬಂಡವಾಳ ಹೂಡಿದರು. ಹಲವಾರು ಸೂಪರ್-ಡೂಪರ್ ಹಿಟ್ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದರು.

ರಾಜ್​ಕುಮಾರ್ ನಟನೆಯ ಅನೇಕ ಸಿನಿಮಾಗಳಲ್ಲಿ ದ್ವಾರಕೀಶ್ ಬಣ್ಣ ಹಚ್ಚಿದ್ದರು. ‘ತಾಯಿ ದೇವರು’, ‘ನ್ಯಾಯವೇ ದೇವರು’, ‘ಜನ್ಮ ರಹಸ್ಯ’ ಸೇರಿ ರಾಜ್ಕುಮಾರ್ ಅವರ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ದ್ವಾರಕೀಶ್ ನಟಿಸಿದ್ದರು. ‘ಪ್ರಚಂಡ ಕುಳ್ಳ’,‘ಕಳ್ಳ ಕುಳ್ಳ’ ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿತು. ನಿರ್ಮಾಪಕರಾಗಿಯೂ ಅವರು ಗಮನ ಸೆಳೆದರು. ‘ಭಾಗ್ಯವಂತರು’, ‘ಕಿಟ್ಟು ಪುಟ್ಟು’, ‘ಕುಳ್ಳ ಕುಳ್ಳಿ’, ‘ಗುರು ಶಿಷ್ಯರು’ ಸೇರಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನಿರ್ಮಾಣ ಮಾಡಿದ್ದಾರೆ. 2019ರಲ್ಲಿ ರಿಲೀಸ್ ಆದ ‘ಆಯುಷ್ಮಾನ್ಭವ’ ಅವರ ನಿರ್ಮಾಣದ ಕೊನೆಯ ಸಿನಿಮಾ.

ಇದನ್ನೂ ಓದಿ: ಹೃದಯಾಘಾತದಿಂದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ನಿಧನ

ಇದನ್ನೂ ಓದಿ  ಲೋಕಸಭೆ ಚುನಾವಣೆ ಟಿಕೆಟ್​ಗಾಗಿ ಟೆಂಪಲ್​ ರನ್​​: ಬಾದಾಮಿ ಬನಶಂಕರಿ ಮೊರೆ ಹೋದ ಆಕಾಂಕ್ಷಿಗಳು

ನಿರ್ದೇಶಕರಾಗಿಯೂ ದ್ವಾರಕೀಶ್ ಹೆಸರು ಮಾಡಿದ್ದರು. ‘ನೀ ಬರೆದ ಕಾದಂಬರಿ’ ಅವರ ನಿರ್ದೇಶನದ ಮೊದಲ ಸಿನಿಮಾ. ಆ ಬಳಿಕ, ‘ಆಫ್ರಿಕಾದಲ್ಲಿ ಶೀಲಾ’, ‘ಕಿಲಾಡಿಗಳು’ ಮೊದಲಾದ ಸಿನಿಮಾಗಳನ್ನು ಅವರು ನಿರ್ದೇಶಿಸಿದರು. 2001ರ ಈಚೆಗೆ ಅವರು ಸಿನಿಮಾ ನಿರ್ಮಾಣಕ್ಕೆ ಇಳಿದಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ


Comments

No comments yet. Why don’t you start the discussion?

Leave a Reply

Your email address will not be published. Required fields are marked *