ರಾಜ್ಯದ ಅಂಗವಿಕಲ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಸರ್ಕಾರದಿಂದ  ಪರೀಕ್ಷಾ ವಿನಾಯಿತಿ.! ಜೊತೆಗೆ ಮಕ್ಕಳಿಗೆ ವಿಶೇಷ ಪ್ರೋತ್ಸಾಹ.?

ರಾಜ್ಯದ ಅಂಗವಿಕಲ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಸರ್ಕಾರದಿಂದ  ಪರೀಕ್ಷಾ ವಿನಾಯಿತಿ.! ಜೊತೆಗೆ ಮಕ್ಕಳಿಗೆ ವಿಶೇಷ ಪ್ರೋತ್ಸಾಹ.?

[ad_1]

ಎಲ್ಲರಿಗೂ ನಮಸ್ಕಾರ,  ನಮ್ಮ ಕರ್ನಾಟಕ ರಾಜ್ಯದಲ್ಲಿ ಎಲ್ಲಾ ಶಾಲಾ ಕಾಲೇಜುಗಳ ಅಂಗವಿಕಲ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಮಕ್ಕಳಿಗಾಗಿ ವಿಶೇಷ ಪ್ರೋತ್ಸಾಹವನ್ನು  ನೀಡುತ್ತಿದೆ ಸದ್ಯ ಇದೀಗ ರಾಜ್ಯದಲ್ಲಿ ಶಾಲೆ ಮತ್ತು ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ 95,000ಕ್ಕೂ ಹೆಚ್ಚು ಅಂಗವಿಕಲ ವಿದ್ಯಾರ್ಥಿಗಳಿಗೆ ಪರೀಕ್ಷಾ ವಿನಾಯಿತಿ ನೀಡುತ್ತಿದ್ದು ಇದರ ಜೊತೆಗೆ ಇನ್ನಿತರ ಕೆಲವು ಅನುಕೂಲಗಳನ್ನು ಕೂಡ ಮಾಡಿಕೊಡುತ್ತಿದೆ,

 

ರಾಜ್ಯದ ಅಂಗವಿಕಲ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಸರ್ಕಾರದಿಂದ  ಪರೀಕ್ಷಾ ವಿನಾಯಿತಿ.! ಜೊತೆಗೆ ಮಕ್ಕಳಿಗೆ ವಿಶೇಷ ಪ್ರೋತ್ಸಾಹ.?

ಸದ್ಯ ರಾಜ್ಯದಲ್ಲಿ  ಎಲ್ಲಾ ಬಡ ಮಕ್ಕಳಿಗೆ ನೀಡುವ  ಅದೇ ಪ್ರೋತ್ಸಾಹ ಮತ್ತು ವಿನಾಯತಿಯನ್ನು ಅಂಗವಿಕಲ ಮಕ್ಕಳಿಗೂ ಕೂಡ ನೀಡುತ್ತಿದ್ದ ಶಿಕ್ಷಣ ಇಲಾಖೆ ಮತ್ತು  ಸರ್ಕಾರದ  ಆ ನಿಯಮವನ್ನು ಸದ್ಯದ ರಾಜ್ಯ ಸರ್ಕಾರ ಬದಲಾಯಿಸಲು ಮುಂದಾಗಿದೆ,  ರಾಜ್ಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಅಂಗವಿಕಲ ಮಕ್ಕಳಿಗೆ ಪರೀಕ್ಷೆಯಲ್ಲಿ ವಿನಾಯಿತಿ ನೀಡಲಾಗುತ್ತಿದೆ ಅದು ಶುಲ್ಕದಿಂದ ಹಿಡಿದು ಇನ್ನಿತರ  ಎಲ್ಲಾ ವ್ಯವಸ್ಥೆಯಲ್ಲಿ ಪ್ರೋತ್ಸಾಹ ನೀಡಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ. 

 

ರಾಜ್ಯದ ಅಂಗವಿಕಲ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಸರ್ಕಾರದಿಂದ  ಪರೀಕ್ಷಾ ವಿನಾಯಿತಿ.!

ಕರ್ನಾಟಕ ರಾಜ್ಯ ಸರ್ಕಾರವು ವಿದ್ಯಾರ್ಥಿಗಳಿಗಾಗಿ ಈಗಾಗಲೇ ಬಹಳಷ್ಟು ಯೋಜನೆಗಳನ್ನು ಜಾರಿ ಮಾಡಿದೆ ಅಲ್ಲದೆ ಬಡ ವಿದ್ಯಾರ್ಥಿಗಳಿಗಾಗಿ ಬಹಳಷ್ಟು ಅನುಕೂಲವಾಗುವಂತಹ ಯೋಜನೆಗಳು ಮತ್ತು ಸೌಲಭ್ಯಗಳನ್ನು ಸರ್ಕಾರದಿಂದ ನೀಡಲಾಗುತ್ತಿದೆ ಆದರೆ ರಾಜ್ಯದ ಅಂಗವಿಕಲ ವಿದ್ಯಾರ್ಥಿಗಳಿಗೆ ಅದೇ ಬಡ ವಿದ್ಯಾರ್ಥಿಗಳ ಸೌಲಭ್ಯಗಳು ಮಾತ್ರ ಸಿಗುತ್ತಿದ್ದು ಹೆಚ್ಚು ಸೌಲಭ್ಯ ಅಥವಾ ಪ್ರೋತ್ಸಾಹ ಈ ಅಂಗವಿಕಲ ವಿದ್ಯಾರ್ಥಿಗಳಿಗೆ ಸಿಗುತ್ತಿರಲಿಲ್ಲ ಹಾಗಾಗಿ ಸದ್ಯದ ರಾಜ್ಯ ಸರ್ಕಾರವು ಈ ಬಗ್ಗೆ ಗಮನಹರಿಸಿ ಅಂಗವಿಕಲ ವಿದ್ಯಾರ್ಥಿಗಳಿಗಾಗಿ ಪರೀಕ್ಷಾ ವಿನಾಯಿತಿಯನ್ನು ನೀಡಲು ಆದೇಶ ನೀಡಿದೆ ಇದರ ಜೊತೆಗೆ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಸೌಲಭ್ಯಗಳನ್ನು ಕೂಡ ನೀಡಲು ಮುಂದಾಗಿದೆ.

ಹೌದು ಶಾಲಾ-ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಪಡೆಯಲು ದೇಹದ ಎಲ್ಲಾ ಭಾಗಗಳು ಕೂಡ ಸರಿಯಾಗಿರುವ ಮಕ್ಕಳೇ ವಿದ್ಯಾಭ್ಯಾಸ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ ಇದರ ನಡುವೆ ಅಂಗವಿಕಲ ಹಾಗಿದ್ದು ಕೂಡ ವಿದ್ಯಾಭ್ಯಾಸ ಮಾಡಬೇಕು ಎಂಬ ಆಸೆ ಇಟ್ಟುಕೊಂಡು ಸದ್ಯಕ್ಕೆ ರಾಜ್ಯದಲ್ಲಿ 95,000 ಕ್ಕಿಂತ ಹೆಚ್ಚು ಅಂಗವಿಕಲ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಪಡೆಯುತ್ತಿದ್ದು ಅಂತಹ ವಿದ್ಯಾರ್ಥಿಗಳಿಗೆ ಮತ್ತಷ್ಟು ಪ್ರೋತ್ಸಾಹವನ್ನು ನೀಡಬೇಕು ಮತ್ತು ಅದೇ ರೀತಿಯ ಮತ್ತಷ್ಟು ಅಂಗವಿಕಲ  ಮಕ್ಕಳು ವಿದ್ಯಾಭ್ಯಾಸವನ್ನು ಪಡೆಯಬೇಕು ಎಂಬ ದೃಷ್ಟಿಯಿಂದ ಸರ್ಕಾರವು ಪರೀಕ್ಷಾ ವಿನಾಯಿತಿ ಮತ್ತು ಇನ್ನಿತರ ಸೌಲಭ್ಯಗಳನ್ನು ಅಂಗವಿಕಲ ವಿದ್ಯಾರ್ಥಿಗಳಿಗೆ ನೀಡಲು ಆದೇಶ ನೀಡಿದೆ. 

ಅಂಗವಿಕಲ ವಿದ್ಯಾರ್ಥಿಗಳಿಗೆ ವಿಶೇಷ ಸೌಲಭ್ಯ ಮತ್ತು ಪರೀಕ್ಷಾ ವಿನಾಯಿತಿ.?

ನಮ್ಮ ಕರ್ನಾಟಕದ ಶಿಕ್ಷಣ ಇಲಾಖೆಯ ನಿಯಮದ ಪ್ರಕಾರ ಅಂಗವಿಕಲ ವಿದ್ಯಾರ್ಥಿಗಳಿಗೆ ಹತ್ತನೇ ತರಗತಿ ಮತ್ತು ನಂತರದ ಪಿಯುಸಿ ಪದವಿ ವಿದ್ಯಾರ್ಥಿಗಳಿಗೆ ಈ ಪರೀಕ್ಷಾ ವಿನಾಯಿತಿ ಮತ್ತು ಇನ್ನಿತರ ಸೌಲಭ್ಯಗಳನ್ನು ನೀಡಲಾಗುತ್ತಿತ್ತು ಆದರೆ ಒಂದನೇ ತರಗತಿಯಿಂದ 9ನೇ ತರಗತಿವರೆಗೂ ಯಾವುದೇ ರೀತಿಯ ಪರೀಕ್ಷಾ ವಿನಾಯಿತಿ ಮತ್ತು ಸೌಲಭ್ಯಗಳನ್ನು ನೀಡುತ್ತಿರಲಿಲ್ಲ ಆದ್ದರಿಂದ ಸರ್ಕಾರವು ಅಂಗವಿಕಲ ವಿದ್ಯಾರ್ಥಿಗಳಿಗೆ ಒಂದನೇ ತರಗತಿಯಿಂದಲೂ ಕೂಡ ವಿಶೇಷ ಸೌಲಭ್ಯ ಮತ್ತು ಪರೀಕ್ಷಾ ವಿನಾಯಿತಿ ನೀಡಲು ಆದೇಶ ನೀಡಿದೆ.

ಅಂಗವಿಕಲ ವಿದ್ಯಾರ್ಥಿಗಳ  ಹೊಸ ಪರೀಕ್ಷಾ ವಿನಾಯಿತಿ ಮತ್ತು ವಿಶೇಷ ಸೌಲಭ್ಯಗಳಿಂದ ಇನ್ನು ಒಂದನೇ ತರಗತಿಯಿಂದ ಈ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ.

  • ಮೊದಲನೆಯದಾಗಿ ಪರ್ಯಾಯ ಬರಹಗಾರರು: ಅಂಗವಿಕಲ ವಿದ್ಯಾರ್ಥಿ ಪರೀಕ್ಷೆ ಬರೆಯಲು ಸಾಧ್ಯವಾಗದಿದ್ದರೆ ಬೇರೆ ವ್ಯಕ್ತಿಯಿಂದ ಉತ್ತರ ನೀಡಿ ಪರೀಕ್ಷೆ ಬರೆಸಬಹುದು.
  • ಹೆಚ್ಚುವರಿ ಸಮಯ:  ಅಂಗವಿಕಲ ವಿದ್ಯಾರ್ಥಿಗಳಿಗೆ ಸಾಮಾನ್ಯ ವಿದ್ಯಾರ್ಥಿಗಳಿಂದ ಹೆಚ್ಚುವರಿ ಸಮಯ ನೀಡಲು ತಿಳಿಸಲಾಗಿದೆ
  • ಭಾಷಾ  ವಿನಾಯಿತಿ:  ವಿದ್ಯಾರ್ಥಿಯು ಯಾವುದೇ ಭಾಷೆಯಲ್ಲಿ ಪರೀಕ್ಷೆ ಬರೆಯಬೇಕು ಎಂದರು ಅದೇ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಬಹುದು.
  • ಪ್ರತ್ಯೇಕ ಪ್ರಶ್ನೆಗಳು:  ಎಲ್ಲಾ ವಿದ್ಯಾರ್ಥಿಗಳಿಗೆ ನೀಡುವ ಪ್ರಶ್ನೆಗಳಿಗಿಂತ ಅಂಗವಿಕಲ ವಿದ್ಯಾರ್ಥಿಗಳಿಗೆ ಬೇರೆ ಸುಲಭ ಪ್ರಶ್ನೆಗಳನ್ನು ನೀಡುವ ಸೌಲಭ್ಯ
  • ಮತ್ತು ಉಚ್ಚಾರಣ ದೋಷಗಳ  ವಿನಾಯಿತಿ ಮತ್ತು ವಿಷಯಗಳ ಆಯ್ಕೆಯಲ್ಲಿ ಸಡಿಲತೆ ಹೀಗೆ ಕೆಲವು ಹೊಸ ಸೌಲಭ್ಯಗಳನ್ನು ಅಂಗವಿಕಲ ವಿದ್ಯಾರ್ಥಿಗಳಿಗೆ ಒಂದನೇ ತರಗತಿಯಿಂದಲೇ ನೀಡಲು ಸರ್ಕಾರ ಶಿಕ್ಷಣ ಇಲಾಖೆಗೆ ಆದೇಶ ನೀಡಿದೆ ಧನ್ಯವಾದಗಳು.. 

[ad_2]

Comments

No comments yet. Why don’t you start the discussion?

Leave a Reply

Your email address will not be published. Required fields are marked *