ಐಸಿಸಿ ವಿಶ್ವಕಪ್ 2023: ಭಾರತ- ನ್ಯೂಜಿಲೆಂಡ್ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆ ? ಏನ್‌ ಹೇಳುತ್ತೆ ಕ್ರಿಕೆಟ್‌ ಭವಿಷ್ಯ, ಪಿಚ್‌ ರಿಪೋರ್ಟ್

ಐಸಿಸಿ ವಿಶ್ವಕಪ್ 2023: ಭಾರತ- ನ್ಯೂಜಿಲೆಂಡ್ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆ ? ಏನ್‌ ಹೇಳುತ್ತೆ ಕ್ರಿಕೆಟ್‌ ಭವಿಷ್ಯ, ಪಿಚ್‌ ರಿಪೋರ್ಟ್

ಐಸಿಸಿ ವಿಶ್ವಕಪ್ 2023 ಭಾರತ-ನ್ಯೂಜಿಲೆಂಡ್ ಪಂದ್ಯವನ್ನು ಯಾರು ಗೆಲ್ಲುತ್ತಾರೆ ಕ್ರಿಕೆಟ್ ಭವಿಷ್ಯ ಏನು, ಪಿಚ್ ವರದಿ

ಧರ್ಮಶಾಲಾ : ಐಸಿಸಿ ಏಕದಿನ ವಿಶ್ವಕಪ್ 2023ನಲ್ಲಿ (ICC World Cup 2023) ಇಂದು ಭಾರತ ಹಾಗೂ ನ್ಯೂಜಿಲೆಂಡ್‌ (India Vs Newzealand) ತಂಡಗಳ ನಡುವೆ ಹೈವೋಲ್ಟೇಜ್‌ ಪಂದ್ಯ ನಡೆಯಲಿದೆ. ಸತತ ನಾಲ್ಕು ಪಂದ್ಯಗಳನ್ನು ಗೆದ್ದಿರುವ ತಂಡಗಳ ನಡುವಿನ ಕಾದಾಟ ಕುತೂಹಲ ಮೂಡಿಸಿದೆ. ಹಾಗಾದ್ರೆ ಇಂದಿನ ಪಂದ್ಯವನ್ನು ಗೆಲ್ಲುವವರಾರು ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್‌

ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಭಾರತ ಹಾಗೂ ನ್ಯೂಜಿಲೆಂಡ್‌ ನಡುವೆ ಪಂದ್ಯ ನಡೆಯಲಿದೆ. ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದಿರುವ ಖ್ಯಾತಿ ಎರಡೂ ತಂಡಗಳಿವೆ. ಯಾವ ತಂಡ ಗೆಲುವು ಸಾಧಿಸುತ್ತದೆಯೋ ಆ ತಂಡ ವಿಶ್ವಕಪ್‌ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆ.

ಐಸಿಸಿ ವಿಶ್ವಕಪ್ 2023 ಭಾರತ-ನ್ಯೂಜಿಲೆಂಡ್ ಪಂದ್ಯವನ್ನು ಯಾರು ಗೆಲ್ಲುತ್ತಾರೆ ಕ್ರಿಕೆಟ್ ಭವಿಷ್ಯ ಏನು, ಪಿಚ್ ವರದಿ
ಚಿತ್ರದ ಕ್ರೆಡಿಟ್ ಮೂಲ ಮೂಲಕ್ಕೆ

ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳು ಏಕದಿನ ಕ್ರಿಕೆಟ್‌ನಲ್ಲಿ ಇದುವರೆಗೆ 116 ಏಕದಿನ ಪಂದ್ಯಗಳನ್ನು ಆಡಿವೆ. ಈ ಪೈಕಿ 58 ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಿದ್ದರೆ, ನ್ಯೂಜಿಲೆಂಡ್‌ 50 ಪಂದ್ಯಗಳನ್ನು ಗೆದ್ದಿದೆ. ಏಳು ಪಂದ್ಯಗಳಲ್ಲಿ ಯಾವುದೇ ಫಲಿತಾಂಶ ಬಂದಿಲ್ಲ, ಅಲ್ಲದೇ ಒಂದು ಪಂದ್ಯ ಟೈನಲ್ಲಿ ಅಂತ್ಯಕಂಡಿದೆ.

 

ಕಳೆದ ಐದು ಏಕದಿನ ಪಂದ್ಯಗಳನ್ನು ಗಮನಿಸಿದ್ರೆ, ನ್ಯೂಜಿಲೆಂಡ್‌ ತಂಡ ಒಂದೇ ಒಂದು ಪಂದ್ಯಗಳನ್ನೂ ಗೆದ್ದಿಲ್ಲ. ಆದರೆ ಒಂದು ಪಂದ್ಯ ಟೈನಲ್ಲಿ ಅಂತ್ಯ ಕಂಡಿದೆ. ಇನ್ನು ವಿಶ್ವಕಪ್‌ ಪಂದ್ಯಾವಳಿಯ ಲೆಕ್ಕಾಚಾರವನ್ನು ನೋಡಿದ್ರೆ ನ್ಯೂಜಿಲೆಂಡ್‌ ತಂಡ ಭಾರತಕ್ಕಿಂತ ಮುನ್ನಡೆಯನ್ನು ಕಾಯ್ದುಕೊಂಡಿದೆ.

ಇದನ್ನೂ ಓದಿ  ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಆಡಿದ ಏಸ್ ಟೇಬಲ್ ಟೆನಿಸ್ ಆಟಗಾರ್ತಿ ಅರ್ಚನಾ ಕಾಮತ್ ಕ್ರೀಡೆಯನ್ನು ತೊರೆದರು: 'ಇದು ಕೇವಲ ಮತ್ತು ಏಕೆಂದರೆ...'
ಐಸಿಸಿ ವಿಶ್ವಕಪ್ 2023 ಭಾರತ-ನ್ಯೂಜಿಲೆಂಡ್ ಪಂದ್ಯವನ್ನು ಯಾರು ಗೆಲ್ಲುತ್ತಾರೆ ಕ್ರಿಕೆಟ್ ಭವಿಷ್ಯ ಏನು, ಪಿಚ್ ವರದಿ
ಮೂಲ ಸೊರುಸ್‌ಗೆ ಚಿತ್ರದ ಕ್ರೆಡಿಟ್

ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳು ಒಟ್ಟು 9 ಬಾರಿ ಮುಖಾಮುಖಿಯಾಗಿವೆ. ಅದರಲ್ಲಿ 5 ರಲ್ಲಿ ನ್ಯೂಜಿಲೆಂಡ್ ಗೆದ್ದಿದೆ, ಭಾರತ 3 ರಲ್ಲಿ ಮತ್ತು ಒಂದು ಫಲಿತಾಂಶವನ್ನು ನೀಡಲಿಲ್ಲ. ಆದರೆ ಈ ಬಾರಿ ವಿಶ್ವಕಪ್‌ನಲ್ಲಿ ಹಿಂದಿನ ದಾಖಲೆಯನ್ನು ಅಳಿಸಿ ಹಾಕಲು ಭಾರತ ಸಜ್ಜಾಗಿದೆ.

 

2019 ರ ವಿಶ್ವಕಪ್ ನಲ್ಲಿ ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳು ಸೆಮಿಫೈನಲ್‌ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಆದರೆ ಭಾರತ ತಂಡ ನ್ಯೂಜಿಲೆಂಡ್‌ ವಿರುದ್ದ ೧೮ರನ್‌ ಗಳಿಂದ ಸೋಲನ್ನು ಕಂಡು ಫೈನಲ್‌ ನಿಂದ ಹೊರಬಿದ್ದಿತ್ತು. ಆದರೆ ಫೈನಲ್‌ಗೆ ಎಂಟ್ರಿ ಪಡೆದ ನ್ಯೂಜಿಲೆಂಡ್‌ ತಂಡ ಇಂಗ್ಲೆಂಡ್‌ ವಿರುದ್ದ ಫೈನಲ್‌ ನಲ್ಲಿ ಮುಗ್ಗರಿಸಿತ್ತು.

ಭಾರತ vs ನ್ಯೂಜಿಲೆಂಡ್ ಪಂದ್ಯ : ಪಿಚ್ ರಿಪೋರ್ಟ್

ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನ ಪಿಚ್‌ ವೇಗದ ಬೌಲರ್‌ಗಳಿಗೆ ನೆರವಾಗಲಿದೆ. ಆದರೆ ಬ್ಯಾಟ್ಸ್‌ಮನ್‌ಗಳ ಪಾಲಿಗೆ ಈ ಪಿಚ್‌ ಸ್ವರ್ಗ. ಈ ಪಿಚ್‌ನಲ್ಲಿ ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ತಂಡಗಳು ಮುಖಾಮುಖಿ ಆಗಿದ್ದವು.

ಭಾರತ vs ನ್ಯೂಜಿಲೆಂಡ್ ಪಂದ್ಯ : ಹವಾಮಾನ ವರದಿ

ಇದನ್ನೂ ಓದಿ  ಗ್ರೆಗ್ ಬಾರ್ಕ್ಲೇ ಬದಲಿಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರನ್ನು ಐಸಿಸಿ ಅಧ್ಯಕ್ಷರನ್ನಾಗಿ ನೇಮಿಸುವ ಸಾಧ್ಯತೆಯಿದೆ: ವರದಿ

ಧರ್ಮಶಾಲಾದಲ್ಲಿ ಇಂದು ನಡೆಯುವ ಪಂದ್ಯಕ್ಕೆ ಮಳೆಯ ಭೀತಿ ಸ್ವಲ್ಪ ಕಡಿಮೆಯೇ ಇದೆ. ಹವಾಮಾನ ಮುನ್ಸೂಚನೆಯು 24% ಮಳೆಯ ಸಾಧ್ಯತೆಯನ್ನು ಸೂಚಿಸುತ್ತದೆ ಮತ್ತು Weather.com ಪ್ರಕಾರ ತಾಪಮಾನವು ಗರಿಷ್ಠ 19 ಡಿಗ್ರಿಗಳಷ್ಟು ತಂಪಾಗಿರುತ್ತದೆ ಎಂದು ಊಹಿಸಲಾಗಿದೆ. ಸಂಜೆಯ ವೇಳೆಗೆ ತಾಪಮಾನ ಮತ್ತಷ್ಟು ಇಳಿಯಲಿದೆ ಎಂದು ಮಿಂಟ್‌ ವರದಿ ಮಾಡಿದೆ.

 

ಭಾರತ vs ನ್ಯೂಜಿಲೆಂಡ್: ಪಂದ್ಯ ಗೆಲ್ಲುವುದು ಯಾರು ?

Google ನ ನೀಡಿರುವ ಮಾಹಿತಿಯ ಪ್ರಕಾರ. ಭಾರತ ಹಾಗೂ ನ್ಯೂಜಿಲೆಂಡ್‌ ವಿರುದ್ದದ ಪಂದ್ಯದಲ್ಲಿ ಭಾರತ ತಂಡಕ್ಕೆ ಗೆಲುವಿನ ಅವಕಾಶ ಹೆಚ್ಚಿದೆ. 67% ರಷ್ಟು ಇಂದಿನ ಪಂದ್ಯ ಭಾರತ ತನ್ನ ಜಯದ ಅಭಿಯಾನವನ್ನು ಮುಂದುವರಿಸಲಿದೆ.

ಐಸಿಸಿ ವಿಶ್ವಕಪ್ 2023 ಭಾರತ-ನ್ಯೂಜಿಲೆಂಡ್ ಪಂದ್ಯವನ್ನು ಯಾರು ಗೆಲ್ಲುತ್ತಾರೆ ಕ್ರಿಕೆಟ್ ಭವಿಷ್ಯ ಏನು, ಪಿಚ್ ವರದಿ
ಚಿತ್ರದ ಕ್ರೆಡಿಟ್ ಮೂಲ ಮೂಲಕ್ಕೆ

ಇನ್ನು ಧರ್ಮಶಾಲಾ ಮೈದಾನದಲ್ಲಿ ಯಾವ ತಂಡ ಮೊದಲು ಬ್ಯಾಟಿಂಗ್‌ ನಡೆಸುತ್ತದೆಯೋ ಆ ತಂಡಕ್ಕೆ ಗೆಲುವಿನ ಅವಕಾಶ ಹೆಚ್ಚಿದೆ. ಅದ್ರಲ್ಲೂ ಭಾರತ ತಂಡಕ್ಕೆ ತವರು ಮೈದಾನದಲ್ಲಿ ಗೆಲುವಿನ ಅವಕಾಶ ಹೆಚ್ಚಿದೆ. ಅಲ್ಲದೇ ಭಾರತ ಮಾತ್ರವೇ ಅಜೇಯವಾಗಿ ಫೈನಲ್‌ ಪ್ರವೇಶಿಸಲಿದೆ ಎಂದು ಕ್ರಿಕೆಟ್‌ ಪಂಡಿತರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಭಾರತ vs ನ್ಯೂಜಿಲೆಂಡ್ ಫ್ಯಾಂಟಸಿ ತಂಡ

ಇದನ್ನೂ ಓದಿ  IND vs ಬಾಂಗ್ಲಾದೇಶ: ರಿಷಭ್ ಪಂತ್ ಬಾಂಗ್ಲಾದೇಶಕ್ಕೆ ಫೀಲ್ಡ್ ಸೆಟ್, 'ಇಧರ್ ಆಯೇಗಾ ಏಕ್...'; ಎಂಎಸ್ ಧೋನಿ ಕ್ಷಣವನ್ನು ನೆನಪಿಸಿಕೊಂಡ ಅಭಿಮಾನಿಗಳು | ವೀಕ್ಷಿಸಿ

ರೋಹಿತ್ ಶರ್ಮಾ, ಶುಭಮನ್ ಗಿಲ್, ಡೆವೊನ್ ಕಾನ್ವೇ, ವಿಲ್ ಯಂಗ್, ವಿರಾಟ್ ಕೊಹ್ಲಿ (ನಾಯಕ), ಕೆಎಲ್ ರಾಹುಲ್ (ವಿಕೆಟ್‌ ಕೀಪರ್), ಡೆರಿಲ್ ಮಿಚೆಲ್, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಲಾಕಿ ಫರ್ಗುಸನ್ (ಉಪನಾಯಕ ) ಮತ್ತು ಟ್ರೆಂಟ್ ಬೌಲ್ಟ್.

ICC ವಿಶ್ವಕಪ್ 2023 ಭಾರತ-ನ್ಯೂಜಿಲೆಂಡ್ ಪಂದ್ಯವನ್ನು ಯಾರು ಗೆಲ್ಲುತ್ತಾರೆ? ಕ್ರಿಕೆಟ್ ಭವಿಷ್ಯ ಏನು, ಪಿಚ್ ವರದಿ

Comments

No comments yet. Why don’t you start the discussion?

Leave a Reply

Your email address will not be published. Required fields are marked *