ಆಸ್ಪತ್ರೆಯಲ್ಲಿ ಪತ್ನಿಗೆ ಹೆರಿಗೆ, ಆದರೂ ತಮ್ಮ ಸ್ವಾಗತಕ್ಕೆ ಬಂದ ಕಾರ್ಯಕರ್ತನ ಬಗ್ಗೆ ಮೋದಿ ಮಾತು

ಆಸ್ಪತ್ರೆಯಲ್ಲಿ ಪತ್ನಿಗೆ ಹೆರಿಗೆ, ಆದರೂ ತಮ್ಮ ಸ್ವಾಗತಕ್ಕೆ ಬಂದ ಕಾರ್ಯಕರ್ತನ ಬಗ್ಗೆ ಮೋದಿ ಮಾತು


ಆಸ್ಪತ್ರೆಗೆಯಲ್ಲಿ ಹೆಂಡ್ತಿ ಹೆರಿಗೆ, ಆದರೂ ತಮ್ಮ ಸ್ವಾಗತಕ್ಕೆ ಬಂದ ಕಾರ್ಯಕರ್ತನ ಬಗ್ಗೆ ಮೋದಿ ಮಾತು

ಚೆನ್ನೈ, ಮಾ.4: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು ತಮಿಳುನಾಡು ರಾಜ್ಯದ ರಾಜಧಾನಿ ಚೆನ್ನೈಗೆ ಭೇಟಿ ನೀಡಿದರು. ಚೆನ್ನೈನಲ್ಲಿ ನಡೆದ ಸಮಾವೇಶದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಚೆನ್ನೈ (ಚೆನ್ನೈ) ಭೇಟಿ ವೇಳೆ ಮೋದಿ ಅವರು ಭಾವುಕರಾಗುವ ಸಂಗತಿಯೂ ನಡೆದಿದೆ. ಹೌದು, ಕಾರ್ಯಕರ್ತರೊಬ್ಬರು ತನ್ನ ಪತ್ನಿ ಆಸ್ಪತ್ರೆಯಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರೂ ಪತ್ನಿಯ ಭೇಟಿಗೂ ಮುನ್ನ ಪ್ರಧಾನಿ ಮೋದಿ ಅವರನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.

ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡ ಮೋದಿ, “ಬಹಳ ವಿಶೇಷವಾದ ಸಂವಹನ! ಚೆನ್ನೈ ವಿಮಾನ ನಿಲ್ದಾಣದಲ್ಲಿ, ನಮ್ಮ ಕಾರ್ಯಕರ್ತರಲ್ಲೊಬ್ಬರಾದ ಶ್ರೀ ಅಶ್ವಂತ್ ಪಿಜೈ ಜಿ ಅವರು ನನ್ನನ್ನು ಸ್ವಾಗತಿಸಲು ಬಂದಿದ್ದರು. ಅವರ ಪತ್ನಿ ಈಗಷ್ಟೇ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ ಆದರೆ ಅವರು ಇನ್ನೂ ಅವರನ್ನು ಭೇಟಿ ಮಾಡಿಲ್ಲ ಎಂದು ಅವರು ನನಗೆ ಹೇಳಿದರು. ಅವರು ಇಲ್ಲಿಗೆ ಬರಬಾರದಿತ್ತು ಎಂದು ನಾನು ಅವರಿಗೆ ಹೇಳಿದೆ ಮತ್ತು ಅವರಿಗೆ ಮತ್ತು ಅವರ ಕುಟುಂಬಕ್ಕೆ ನನ್ನ ಆಶೀರ್ವಾದವನ್ನು ತಿಳಿಸಿದ್ದೇನೆ” ಎಂದರು.

ಇದನ್ನೂ ಓದಿ  Gold Silver Price on 21st February: ಭಾರತದಲ್ಲಿ ಚಿನ್ನದ ಬೆಲೆ ಇಳಿಕೆ, ವಿದೇಶಗಳಲ್ಲಿ ಏರಿಕೆ; ಇಲ್ಲಿದೆ ಇವತ್ತಿನ ಚಿನ್ನ, ಬೆಳ್ಳಿ ದರಪಟ್ಟಿ

ಇದನ್ನೂ ಓದಿ: ನೀವು ನನ್ನವರು, ಮೋದಿ ನಿಮ್ಮವ ಎಂದ ಪ್ರಧಾನಿ

“ನಮ್ಮ ಪಕ್ಷದಲ್ಲಿ ಅಂತಹ ಸಮರ್ಪಿತ ಮತ್ತು ಶ್ರದ್ಧಾಭಕ್ತಿಯುಳ್ಳ ಕಾರ್ಯಕರ್ತರು ಇರುವುದನ್ನು ನೋಡಿದಾಗ ಸಂತೋಷವಾಗುತ್ತದೆ. ನಮ್ಮ ಕಾರ್ಯಕರ್ತರ ಪ್ರೀತಿ ಮತ್ತು ವಾತ್ಸಲ್ಯವನ್ನು ನೋಡಿದಾಗ ನಾನು ಭಾವುಕನಾಗುತ್ತೇನೆ” ಎಂದು ಬರೆದುಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಟ್ವೀಟ್

ಚೆನ್ನೈನಲ್ಲಿ ಮೋದಿಗೆ ಭರ್ಜರಿ ಸ್ವಾಗತ

ತಮಿಳುನಾಡಿನಲ್ಲಿ ಅಣ್ಣಾಮಲೈ ಅವರು ನಿರಂತರವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದು, ಭೇಟಿಕೊಟ್ಟಲ್ಲೆಲ್ಲಾ ಜನರನ್ನು ಸೆಳೆಯುತ್ತಿದ್ದಾರೆ. ಒಂದೆಡೆ ಅಣ್ಣಾಮಲೈ ಬಿರುಸಿನ ಪಕ್ಷ ಸಂಘಟನೆ, ಇನ್ನೊಂದೆಡೆ, ಮೋದಿ ಅಲೆ. ಇದರ ಪರಿಣಾಮವಾಗಿ ಚೆನ್ನೈನಲ್ಲಿ ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ ಜನರು ನೆಚ್ಚಿನ ನಾಯಕನಿಗೆ ಭರ್ಜರಿ ಸ್ವಾಗತ ಕೋರಿದರು. ಈ ಬಗ್ಗೆಯೂ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ ಮೋದಿ, ಚೆನ್ನೈಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಇದನ್ನೂ ಓದಿ  ಹಾಸನ: ಕೋರ್ಟ್​​ನಲ್ಲಿ ಸಾಕ್ಷಿ ಹೇಳಲು ಮುಂದಾಗಿದ್ದ ವ್ಯಕ್ತಿಯ ಬರ್ಬರ ಕೊಲೆ

ಇದನ್ನೂ ಓದಿ: Modi ka Parivar: ಮೋದಿ ಹಿಂದೂ ಅಲ್ಲ, ಪರಿವಾರವಿಲ್ಲ ಎನ್ನುವ ಲಾಲೂ ಹೇಳಿಕೆಗೆ ತಿರುಗೇಟು ಕೊಟ್ಟ ಬಿಜೆಪಿ ನಾಯಕರು

ನರೇಂದ್ರ ಮೋದಿ ಟ್ವೀಟ್

ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ತಮಿಳುನಾಡಿನ ಪ್ರಗತಿಗೆ ಎನ್‌ಡಿಎ ಬದ್ಧವಾಗಿದೆ ಎಂದರು. ಅಲ್ಲದೆ, ಇಂಧನ ಭದ್ರತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಎನ್‌ಡಿಎ ಸರ್ಕಾರದ ಪ್ರಯತ್ನಗಳ ಕುರಿತು ಮಾತನಾಡಿದರು.

ಚೆನ್ನೈನಲ್ಲಿ ಪ್ರವಾಹ ಸಂಭವಿಸಿದಾಗ, ಡಿಎಂಕೆಯು ಮಾಧ್ಯಮ ನಿರ್ವಹಣೆಯಲ್ಲಿ ಹೆಚ್ಚು ಆಸಕ್ತಿ ವಹಿಸಿತ್ತು ಎಂಬುದನ್ನು ಜನರು ಎಂದಿಗೂ ಮರೆಯಬಾರದು ಎಂದು ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ಐಎನ್​ಡಿಐಎ ವಿರುದ್ಧವೂ ಟೀಕಾಪ್ರಹಾರ ನಡೆಸಿದರು. ಐಎನ್​ಡಿಐಎಗೆ ಕುಟುಂಬಗಳು ಮೊದಲು, ಆದರೆ, ಮೋದಿಗೆ ರಾಷ್ಟ್ರ ಮೊದಲು ಎಂದರು.

ಮೋದಿ ಭೇಟಿಯಾದ ವೈಜಯಂತಿಮಾಲಾ

ಚೆನ್ನೈ ಭೇಟಿ ವೇಳೆ ಮೋದಿ ಅವರನ್ನು ಭಾರತೀಯ ನಟಿ ಮತ್ತು ನರ್ತಕಿ ವೈಜಯಂತಿಮಾಲಾ ಅವರು ಭೇಟಿಯಾದರು. ಈ ಬಗ್ಗೆಯೂ ಟ್ವೀಟ್ ಮಾಡಿದ ಮೋದಿ, “ವೈಜಯಂತಿಮಾಲಾ ಅವರನ್ನು ಚೆನ್ನೈನಲ್ಲಿ ಭೇಟಿಯಾಗಿದ್ದಕ್ಕೆ ಖುಷಿಯಾಗಿದೆ. ಆಕೆ ಇತ್ತೀಚೆಗೆ ಪದ್ಮವಿಭೂಷಣ ಪ್ರಶಸ್ತಿಯನ್ನು ಪಡೆದಿದ್ದಾರೆ ಮತ್ತು ಭಾರತೀಯ ಸಿನಿಮಾ ಜಗತ್ತಿಗೆ ನೀಡಿದ ಅನುಕರಣೀಯ ಕೊಡುಗೆಗಾಗಿ ಭಾರತದಾದ್ಯಂತ ಮೆಚ್ಚುಗೆ ಪಡೆದಿದ್ದಾರೆ” ಎಂದರು.

ಇದನ್ನೂ ಓದಿ  ಬಳ್ಳಾರಿ: ಬಿಸ್ಕೆಟ್‌ ಫ್ಯಾಕ್ಟರಿಯಲ್ಲಿ ಬಾಯ್ಲರ್ ಸ್ಫೋಟ; ಕಾರ್ಮಿಕ ಸಾವು, ಒಬ್ಬ ಗಂಭೀರ

ಪ್ರಧಾನಿ ನರೇಂದ್ರ ಮೋದಿ ಟ್ವೀಟ್

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 10:50 pm, ಸೋಮವಾರ, 4 ಮಾರ್ಚ್ 24

ತಾಜಾ ಸುದ್ದಿ




Comments

No comments yet. Why don’t you start the discussion?

Leave a Reply

Your email address will not be published. Required fields are marked *